ಗೆಲ್ಲೋರು, ಸೋಲೋರು ಯಾರು..?

ಕನ್ನಡ ಚಿತ್ರರಂಗದಲ್ಲಿ ಈ ವಾರ (ಶುಕ್ರವಾರ) ಬರೊಬ್ಬರಿ 5 ಚಿತ್ರಗಳು ತೆರೆ ಕಾಣುತ್ತಿವೆ. ಕನ್ನಡದ ಸಿನಿ ಪ್ರೇಕ್ಷಕ ಯಾವ ಸಿನಿಮಾವನ್ನು ಗೆಲ್ಲಿಸುತ್ತಾನೋ ಕಾದು ನೋಡಬೇಕು. ರಘುರಾವ್ ನಿರ್ದೇಶಿಸಿರುವ ಗುರುನಂದನ್ ನಟಿಸಿರುವ “ಮಿಸ್ಸಿಂಗ್ ಬಾಯ್” ಚಿತ್ರವು ಸಾಕಷ್ಟು ಕಾರಣಗಳಿಂದ ಹೆಸರು ಮಾಡಿದೆ, ಅದರಲ್ಲೂ ಟೈಲರನ್ನು ವಿಶೇಷವಾಗಿ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದರು. ಈ ಚಿತ್ರವು ನಿರ್ದೇಶಕ ರಘುರಾಮ್ ಗೆ ತುಂಬ ಬಹು ಮುಖ್ಯವಾಗಿದೆ. ಈ ಸಿನಿಮಾ ಗೆದ್ದರೆ ನಿರ್ದೇಶಕನಿಗೆ ಹೊಸ ಲೈಫ್ ಶುರುವಾಗುತ್ತದೆ ಸೋತರೇ ತುಂಬ ಕಷ್ಟವಾಗಬಹುದು.

ಇದಲ್ಲದೆ ನಟ ಭಯಂಕರ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ “ಚಾಣಾಕ್ಷ” ಈ ಚಿತ್ರವು ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಈ ಚಿತ್ರ ಎರಡು ವರ್ಷಗಳ ಹಿಂದೆ ತಯಾರಾಗಿತ್ತು ಆದರೆ ಬಿಡುಗಡೆ ಭಾಗ್ಯ ಮಾತ್ರ ಈ ಚಿತ್ರಕ್ಕೆ ಸಿಕ್ಕಿರಲಿಲ್ಲ ಆದರೆ ಈಗ ಸಿಕ್ಕಿದೆ. ಮಹೇಶ್ ಚಿನ್ಮಯ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಪ್ರೇಕ್ಷಕರು ಯಾವ ಚಾಣಾಕ್ಷದಿಂದ ಚಿತ್ರ ನೋಡುತ್ತಾರೆ ಗೊತ್ತಾಗುತ್ತೆ.

ಮತ್ತು ಹೊಸ ನಾಯಕನ ಸಿನಿಮಾವು ಕೂಡ ತೆರೆಗೆ ಸಿದ್ದವಾಗಿದೆ ಈ ಚಿತ್ರದ ಹೆಸರು “ಬದ್ರಿ ವರ್ಸಸ್ ಮಧುಮತಿ” ಈ ಚಿತ್ರವನ್ನು ಸಂಪೂರ್ಣ ಹೊಸಬರು ಸೇರಿಕೊಂಡು ಸಿನಿಮಾ ಮಾಡಿದ್ದಾರೆ. ಈ ಚಿತ್ರದ ನಿರ್ದೇಶಕರು ಶಂಕರ್ ನಾರಾಯಣ ರೆಡ್ಡಿ, ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು ಜಯಂತ್ ಕಾಯ್ಕಿಣಿ ಹಾಡಿಗಳನ್ನು ಬರೆದಿದ್ದಾರೆ. ಎಲ್ವಿನ್ ಜೋಶ್ವಾ ಸಂಗೀತದ ಹಾಡುಗಳನ್ನು ಅರ್ಮಾನ್ ಮಲ್ಲಿಕ್, ವಿಜಯ್ ಯೇಸುದಾಸ್ ಹಾಡಿದ್ದಾರಂತೆ. ಇಲ್ಲಿ ನಾಯಕನ ಹೆಸರು ಬದ್ರಿಯಾಗಿದ್ದು, ಈತ ಸೈನಿಕನಾಗಿರುತ್ತಾನೆ. ಈ ಚಿತ್ರಕ್ಕೆ ಪ್ರತಾಪವನ್ ನಾಯಕನಾಗಿದ್ದು, ‘ಆರ್ ಎಕ್ಸ್ ಸೂರಿ’ ಖ್ಯಾತಿಯ ಆಕಾಂಕ್ಷಾ ಗಾಂಧಿ ನಾಯಕಿಯಾಗಿ ನಟಿಸಿದ್ದಾರೆ.

ಇವೆಲ್ಲದರ ನಡುವೆ “ ಅಡಚಣೆಗಾಗಿ ಕ್ಷಮಿಸಿ” ಎಂಬ ಹಾರರ್ ಸಿನಿಮಾ ಕೂಡ ಇದೇ ಶುಕ್ರವಾರ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಪ್ರದೀಪ್ ವರ್ಮ ನಾಯಕರಾಗಿದ್ದಾರೆ ಇದರ ಜೊತೆಗೆ ಸಂಗೀತವನ್ನು ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ಪ್ರದೀಪ್ ವರ್ಮ ಅವರು “ಡಮ್ಕಿ ಡಮಾರ್” ಎಂಬ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು ಆದರೆ ಆ ಚಿತ್ರ ಗೆಲ್ಲಲಿಲ್ಲ ಕಾರಣ ಸರಿಯಾದ ಸಮಯದಲ್ಲಿ ಬಿಡುಗಡೆಯಾಗದಿರುವುದು ಹಾಗೇ ಸರಿಯಾದ ಪಬ್ಲಿಸಿಟಿ ಇಲ್ಲದಿರುವುದು ಡಮ್ಕಿ ಡಮಾರ್ ಚಿತ್ರ ಸೋಲಲು ಕಾರಣವಾಯಿತು. ಆದರೆ ಈಗ ಅಡಚಣೆಗಾಗಿ ಕ್ಷಮಿಸಿ ಚಿತ್ರವು ತೆರೆಗೆ ಬರಲು ಸಿದ್ದವಾಗಿ ಚಿತ್ರಮಂದಿರದ ಮುಂದೆ ನಿಂತಿದೆ. ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೋ ಕಾದು ನೋಡಬೇಕು, ಡಮ್ಕಿ ಡಮಾರ್ ತರ ಮುಗ್ಗರಿಸುತ್ತೋ ಇಲ್ಲ ಎದ್ದು ನಿಲ್ಲುತ್ತೊ ಇದೇ ಶುಕ್ರವಾರ ಗೊತ್ತಾಗುತೆ. ಒಟ್ಟಿನಲ್ಲಿ ಅಡಚಣೆಗಾಗಿ ಕ್ಷಮಿಸಿ ಎಂದು ಪ್ರೇಕ್ಷಕ ಹೇಳದಿದ್ದರೇ ಸಾಕು…

ಮತ್ತೆ ಸುನೀಲ್ ಕುಮಾರ್ ದೇಸಾಯಿ ಇಸ್ ಬ್ಯಾಕ್ ಎಂಬಂತೆ “ಉದ್ಘರ್ಷ” ಎಂಬ ಸಿನಿಮಾ ಮಾಡಿದ್ದಾರೆ. ಈ ಚಿತ್ರವು ಇದೇ ಶುಕ್ರವಾರ ತೆರೆ ಕಾಣುತ್ತಿದೆ. ದೇವರಾಜು ಎಂಬುವರು ಬಂಡವಾಳ ಹೂಡಿದ್ದಾರೆ. ಈ ಚಿತ್ರವು ಕನ್ನಡ ಅಲ್ಲದೆ ತಮಿಳು-ತೆಲುಗು-ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆಯಂತೆ. ಉತ್ತಮ ನಿರ್ದೇಶಕ ಸುನೀಲ್ ಕುಮಾರ್ ಇಸ್ ಬ್ಯಾಕ್ ಗೆ ಹೋಗದೆ ಮುಂದೆ ಬಂದರೆ ಕನ್ನಡ ಚಿತ್ರರಂಗಕ್ಕೆ ಮತ್ತೆ ಒಳ್ಳೆಯ ನಿರ್ದೇಶಕ ಸಿಗುತ್ತಾರೆ..

ಒಟ್ಟಿನಲ್ಲಿ ಈ 5 ಚಿತ್ರಗಳ ಭವಿಷ್ಯ ಇದೇ ಶುಕ್ರವಾರ ಪ್ರೇಕ್ಷಕರ ಕೈಯಲ್ಲಿ ಇದೆ ಯಾವ ಸಿನಿಮಾ ಗೆಲ್ಲುತ್ತೆ ಯಾವ ಸಿನಿಮಾ ಸೋಲುತ್ತೆ ಎಂಬುದು ಕಾದು ನೋಡಬೇಕು..

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *