ಚಿತ್ರಮಂದಿಗಳಿಗೆ ಆದಿ ಲಕ್ಷೀ ಪುರಾಣ..!

ಕನ್ನಡ ಚಿತ್ರರಂಗದ ಲಕ್ಕಿ ನಟಿ ರಾಧಿಕಾಪಂಡಿತ್ ಮದುವೆ ನಂತರ ಒಪ್ಪಿಕೊಂಡಿರುವ ‘ಆದಿ ಲಕ್ಷೀ ಪುರಾಣ’ದಲ್ಲಿ ಸದಾ ಕೆಳವರ್ಗದ ಜನರ ಪರ ಮಾತನಾಡುತ್ತಾ, ಅವರನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸಕ್ತ ಸಮಾಜದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳು ಸಿಗರೇಟ್ ಸೇದುವುದು, ಕಾಲೇಜು ಹುಡುಗರು ಮಾದಕ ವ್ಯಸನಕ್ಕೆ ದಾಸರಾಗುವುದು. ಇದರಿಂದ ಯುವ ಜನಾಂಗವು ಕೆಟ್ಟದಾರಿಗೆ ಹೋಗುತ್ತಿದೆ. ಇದೆಲ್ಲಾದಕ್ಕೆ ಕಡಿವಾಣ ಹಾಕಿ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದೇ ಚಿತ್ರದ ಸಾರಾಂಶವಾಗಿದೆ.
ನಿರೂಪ್‍ಭಂಡಾರಿ ನಾಯಕನಾಗಿ ಮೂರನೇ ಸಿನಿಮಾ. ಆದಿಯಾಗಿ ಡ್ರಗ್ಸ್ ದಂದೆಯನ್ನು ತನಿಖೆ ಮಾಡುವಾಗ, ಲಕ್ಷೀ ಭೇಟಿ ಪರಿಚಯ ಮುಂದೇನು ಎಂಬುದಕ್ಕೆ ಚಿತ್ರಮಂದಿರದಲ್ಲಿ ಉತ್ತರ ಸಿಗುತ್ತದಂತೆ. ಇವರ ತಾಯಿಯಾಗಿ ತಾರ, ತಂದೆಯಾಗಿ ಸುಚೇಂದ್ರಪ್ರಸಾದ್ ಮುಂತಾದವರ ನಟನೆ ಇದೆ. ಮಣಿರತ್ನಂ ಬಳಿ ಸಹಾಯಕರಾಗಿ ಕೆಲಸ ಮಾಡಿದ ಪ್ರಿಯಾ.ವಿ ಕನ್ನಡದಲ್ಲಿ ಮೊದಲಬಾರಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಸೋದರ ಅನೂಪ್‍ಭಂಡಾರಿ ಹೂರಗಿನ ಬ್ಯಾನರ್‍ಗೆ ಮೂರು ಹಾಡುಗಳನ್ನು ಬರೆದು ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ಪ್ರೀತಾಜಯರಾಮನ್, ಸಂಭಾಷಣೆ ಪ್ರಶಾಂತ್‍ರಾಜಪ್ಪ, ನೃತ್ಯ ಎ.ಹರ್ಷ ನಿರ್ವಹಿಸಿದ್ದಾರೆ. ರಾಕ್‍ಲೈನ್ ಎಂಟರ್‍ಟೈನ್ ಮೂಲಕ ರಾಕಲೈನ್‍ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಯುಎ ಪ್ರಮಾಣಪತ್ರ ಪಡೆದಿರುವ ಚಿತ್ರವು ಇದೇ ತಿಂಗಳು ರಾಜ್ಯದ್ಯಾಂತ ತೆರೆ ಕಾಣಲಿದೆ.

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *