ಕುತೂಹಲ ಹುಟ್ಟಿಸುವ ದೇವಕಿ..!

ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್, ಈಗ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ. ಎರಡು ವರ್ಷಗಳ ನಂತರ ಪ್ರಿಯಾಂಕಾ ಉಪೇಂದ್ರ ಮತ್ತು ಲೋಹಿತ್ ಕಾಂಬಿನೇಷನ್ ನಲ್ಲಿ ದೇವಕಿ ಸಿನಿಮಾ ಬಿಡುಗಡೆಗೆಯಾಗಿದೆ.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾದ್ದರಿಂದ ನಾನು ಪ್ರಿಯಾಂಕಾ ಉಪೇಂದ್ರ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಅವರ ಜೊತೆ ವರ್ಷಕ್ಕೊಂದು ಸಿನಿಮಾ ಮಾಡುವ ಬಯಕೆ ಇದೆಯೆಂತೆ.

ಮಕ್ಕಳನ್ನು ಕಿಡ್ನಾಪ್ ಮಾಡುವುದು ದೊಡ್ಡ ಅಪರಾಧ ಮಕ್ಕಳ ಕಳ್ಳ ಸಾಗಣಿಕೆ ವಿಶ್ವದ ಅತ್ಯಂತ ದೊಡ್ಡ ಪಿಡುಗಾಗಿದೆ. ಈ ಒಂದು ಅಂಶವನ್ನು ಇಟ್ಟಕೊಂಡು ಸಿನಿಮಾ ಮಾಡಿದ್ದಾರೆ ಲೋಹಿತ್. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆಯ ‘ದೇವಕಿ’ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವಂತಹ ಅನೇಕ ಸಂಗತಿಗಳು ಇಲ್ಲಿ ನೀವು ನೋಡಬಹುದು. ದೇವಕಿಯಿಂದ ಅವರಲ್ಲಿಯ ಅದ್ಭುತ ತಂತ್ರಜ್ಞನೊಬ್ಬ ಅನಾವರಣಗೊಂಡಿದ್ದಾನೆ. ಮನರಂಜನೆಯ ಅಂಶಗಳಿಗೆ ಹೆಚ್ಚು ಪ್ರಧಾನ್ಯತೆ ಕೊಡದೆ ಉತ್ತಮ ಕತೆಯೊಂದಿಗೆ ಒಂದು ಅದ್ಬುತ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲೋಹಿತ್.
ಈ ಚಿತ್ರದಲ್ಲಿ ತಾಯಿ ಮಗಳ ಪಾತ್ರ ತುಂಬ ನೈಜವಾಗಿ ಮೂಡಿಬಂದಿದೆ ತಾಯಿಗೆ ಮಕ್ಕಳೆಂದರೆ ಪ್ರಾಣ. ಈ ಎರಡು ಜೀವಗಳ ಕಥನವನ್ನು ಹೇಳಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಮಾರ್ಗ ಉತ್ತಮವಾಗಿದೆ. ನೋಡುಗರನ್ನು ಗಮನ ಸೆಳೆಯುತ್ತದೆ.

ದೇವಕಿ ಚಿತ್ರದಲ್ಲಿ ಬಹು ಮುಖ್ಯ ಅಂಶ ಎಂದರೆ ಸಿನಿಮಾಟೋಗ್ರಫಿ. ಕೋಲ್ಕತ್ತದ ಇಡೀ ಸೌಂದರ್ಯವನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ ಸಿನಿಮಾಟೋಗ್ರಾಫರ್‌ ವೇಣು. ವೇಣು ಅವರ ಬಗ್ಗೆ ಹೇಳುವ ಮಾತಿಲ್ಲ ಸುಮಾರು ವರ್ಷಗಳಿಂದ ಉತ್ತಮ ಕೆಲಸದಲ್ಲಿ ಹೆಸರುವಾಸಿಯಾಗಿದ್ದಾರೆ. ಇದಕ್ಕೂ ಮುಂಚೆ ಲೋಹಿತ್ ನಿರ್ದೇಶನದ ದಿ ಮಮ್ಮಿ ಚಿತ್ರಕ್ಕೂ ವೇಣು ಅವರದ್ದೆ ಕ್ಯಾಮೆರಾ ಕೈಚಳಕದಲ್ಲಿ ಗೆದ್ದಿದರು, ಈಗ ಮತ್ತೊಮ್ಮ ಅದೇ ಕಾಂಬಿನೇಷನ್ ಮತ್ತೆ ಗೆದ್ದಿದೆ. ಈ ಚಿತ್ರದಲ್ಲಿ ಹಗಲಿಗಿಂತ ರಾತ್ರಿ ಹೊತ್ತಿನಲ್ಲೇ ಅನೇಕ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. ಪ್ರತಿಯೊಂದು ಪ್ರೇಮ್ ಕೂಡ ಅದ್ಬುತವಾಗಿ ಬಂದಿದೆ.

ಹಾಗೇ ನಟಿ ಪ್ರಿಯಾಂಕಾ ಉಪೇಂದ್ರ ನಟನೆ ಗಮನ ಸೆಳೆಯುವಂತಿದೆ. ಪೂರ್ತಿ ಚಿತ್ರವನ್ನು ಅವರು ತಮ್ಮ ಹೆಗಲ ಮೇಲೆ ಸಮರ್ಥವಾಗಿ ಹೊತ್ತಿದ್ದಾರೆ. ನಟ ಕಿಶೋರ್‌ ನಟನೆಯ ಬಗ್ಗೆ ಮಾತಾಡುವಂತಿಲ್ಲ.  ಇನ್ನೊಂದು ಪಾತ್ರವಿದೆ ಅದು ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಪುತ್ರಿ ಐಶ್ವರ್ಯಾ ಅವರು ಕೂಡ ಈ ಚಿತ್ರದಲ್ಲಿ ಉತ್ತಮ ನಟನೆ ಮಾಡಿದ್ದಾರೆ, ಕನ್ನಡದ ಕಲಾವಿದರ ಜತೆ ಬೆಂಗಾಲಿ ನಟರೂ ತಾರಾಗಣದಲ್ಲಿ ಇದ್ದಾರೆ. ಇಂತಹ ಉತ್ತಮ ಚಿತ್ರವನ್ನು ಪ್ರೇಕ್ಷಕ ಯಾವ ಬೇಜಾರಿಲ್ಲದೆ ಥಿಯೇಟರ್ ಹೋಗಿ ಕಣ್ತುಂಬಿಸಿಕೊಳ್ಳಬಹುದು.

ಸೆಲೆಬ್ರಿಟಿಗಳು ಮೆಚ್ಚಿಕೊಂಡ ದೇವಕಿ

ಬೆಂಗಳೂರಿನ ಪಿವಿಆರ್ ಮಾಲ್‌ನಲ್ಲಿ ನಡೆದ ವರ್ಲ್ಡ್ ಪ್ರೀಮಿಯರ್  ಶೋನಲ್ಲಿ ಕನ್ನಡದ ಹಲವಾರು ಚಿತ್ರರಂಗದವರು ಸಿನೆಮಾ ವೀಕ್ಷಿಸಿದ್ದಾರೆ. ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ಪ್ರಿಯಾಂಕಾ ಉಪೇಂದ್ರ ಅವರ ನಟನೆ ನಿಜಕ್ಕೂ ಶ್ಲಾಘನೀಯ ಮತ್ತು ಅವರ ಮಗಳು ಐಶ್ವರ್ಯಾ ಅವರ ಚೊಚ್ಚಲ ಅಭಿನಯ ಕೂಡ ಚೆನ್ನಾಗಿದೆ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದರು.

ನಟ ಕಿಶೋರ್ ಅವರಿಂದ ಉತ್ತಮ ಪೋಷಕ ಪೋಲೀಸ್ ಪಾತ್ರ ಮತ್ತು ಲೋಹಿತ್ ಅವರ ನಿರ್ದೇಶನ ಉತ್ತಮವಾಗಿ ಮೂಡಿ ಬಂದಿದೆ ಅಂದರು. ಈ ಸಿನೆಮಾ ಕೇವಲ ಕನ್ನಡಿಗರು ಮಾತ್ರವಲ್ಲ ದೇಶದ ಅಥವಾ ಜಗತ್ತಿನ ಪ್ರತಿಯೊಬ್ಬ ತಾಯಿ ತಂದೆಯರು ಮಿಸ್ ಮಾಡದೆ ನೋಡಲೇಬೇಕಾದ ಚಲನಚಿತ್ರ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದರು.

ದೇವಕಿ ಸಿನೆಮಾ ಕೇವಲ ಒಂದು ಭಾಷೆಯ ಸಿನಿಮಾ ಆಗಿ ಕಾಣುವುದಿಲ್ಲ ಆದರೆ ಭಾಷೆಗಳ ಭಾವೈಕ್ಯತೆ ಇಲ್ಲಿ ಎದ್ದು ಕಾಣುತ್ತದೆ ಎಂದು ಪಾರುಲ್ ಯಾದವ್ ಭಾವುಕರಾಗಿ ನುಡಿದರು. ತಾಯಿ ಮತ್ತು ಮಗಳ ಮುಗ್ಧತೆ, ಸಂಬಂಧ ಎಷ್ಟು ಗಟ್ಟಿಯಾಗಿರುತ್ತದೆ, ನಿಜವಾದ ಬಂಧನ ಯಾವುದೇ ಕಾರಣಕ್ಕೂ ದೂರ ಮಾಡುವುದಿಲ್ಲ ಅನ್ನುವುದಕ್ಕೆ ಈ ದೇವಕಿನೇ ಸಾಕ್ಷಿ ಎಂದು ರಾಗಿಣಿ ದ್ವಿವೇದಿ ಮುಕ್ತ ಮನಸ್ಸಿನಿಂದ ಹೇಳಿದರು.

ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ರಾಗಿಣಿ ದ್ವಿವೇದಿ, ಶಿಲ್ಪಾ ಗಣೇಶ್, ಪಾರುಲ್ ಯಾದವ್, ವಿಜಯ್ ರಾಘವೇಂದ್ರ, ಸಂಜನಾ ಗಲ್ರಾನಿ, ತಾರಾ, ಕಾರ್ತಿಕ್ (ಜೆಕೆ), ಸಂಚಾರಿ ವಿಜಯ್, ರೂಪಿಕಾ ಅನುಪಮ ಗೌಡ, ಸಂತೋಷ್ ಆರ್ಯನ್, ಪ್ರಥಮ್, ಸಂಗೀತ ನಿರ್ದೇಶಕ ಗುರು ಕಿರಣ್ , ನಿರ್ದೇಶಕರಾದ ದಯಾಳ್ ಪದ್ಮನಾಬನ್, ಅರವಿಂದ ಸೇರಿದಂತೆ ಇತರರು ಚಿತ್ರವನ್ನು ವೀಕ್ಷಿಸಿದ್ದಾರೆ.

ಪೇಜ್ 3 ರೇಟಿಂಗ್ : 4/5

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *