ಗೆದ್ದ ಖುಷಿಯಲ್ಲಿ ಐಲವ್‍ಯೂ ಸಿನಿಮಾ..!

ರಿಯಲ್ ಸ್ಟಾರ್ ಉಪೇಂದ್ರ ಇತ್ತಿಚೆಗೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ ಕಾರಣ ಅವರ ಪ್ರಜಾಕೀಯದಲ್ಲಿ ಬ್ಯೂಸಿಯಾಗಿದ್ದರು, ತುಂಬ ದಿನಗಳ ನಂತರ ಉಪೇಂದ್ರ ಅವರು ಐ ಲವ್ ಯೂ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಕಾಮಿಡಿ, ಕುಟುಂಬದ ಕತೆ ಹೊಂದಿರುವ ‘ಐ ಲವ್ ಯು’ ಚಿತ್ರವು ಈಗಾಗಲೇ ಇಪ್ಪತ್ತೈದು ದಿನಗಳನ್ನು ಪೂರೈಸಿ 50 ದಿನಗಳತ್ತ ದಾಪುದಾಲು ಹಾಕುತ್ತಿದೆ. ಇತ್ತಿಚೆಗೆ ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು ಸಂಭ್ರಮದ ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದರು. ಎಲ್ಲರ ಬಾಯಲ್ಲಿ ಚಂದ್ರು ಎಂತಹ ಚಿತ್ರ ಮಾಡುತ್ತಾನೆ. ಅಪ್‍ಡೇಟ್ ಆಗಿಲ್ಲವೆಂದು ಹೇಳುತ್ತಿದ್ದು, ಒಮ್ಮೆ ಆಪ್ತ ಗೆಳಯನಿಗೆ ಒಂದು ಲೈನ್ ಹೇಳಿದಾಗ ಇದೇ ಸರಿ ಮುಂದುವರೆಸು ಎಂದು ಧೈರ್ಯ ತುಂಬಿದರು. ಅಂದೇ ಉಪ್ಪಿ ಸರ್‍ಗೆ ಫೋನ್ ಮಾಡಿದಾಗ ಆ ಕಡೆಯಿಂದಲೂ ಹಸಿರು ನಿಶಾನೆ ಸಿಕ್ಕಿತು. ಇಂದು ಜನ ಚಿತ್ರವನ್ನು ಮೆಚ್ಚಿಕೊಂಡು ಐ ಲವ್ ಯು ಎಂದಿದ್ದಾರೆ. ನಿರ್ದೇಶಕನಾಗಿ ಗೆಲುವು ಕಂಡರೂ, ನಿರ್ಮಾಪಕನಾಗಿ ನೋವು ಇತ್ತು. ವಿತರಕರು ಮಾರ್ಕೆಟ್ ಇದೆ ಅಂತ ಹಣ ಕೊಡುತ್ತಲೇ ಇದ್ದಾರೆ. ಯಶಸ್ಸಿನಿಂದ ಜವಬ್ದಾರಿ ಜಾಸ್ತಿ ಆಗಿದೆ. ಈಗಾಗಲೇ ಲಾಭ ಕಂಡಿದ್ದೇನೆ ಎಂದು ಹೇಳುತ್ತಾ ಹೋದರು. ಇದಕ್ಕೂ ಮುನ್ನ ಮಾತನಾಡಿದ ಉಪೇಂದ್ರ ಇಂತಹ ಸಂತಸದ ಕ್ಷಣ ಇಡೀ ಉದ್ಯಮಕ್ಕೆ ಬರಬೇಕು. ಹಿಟ್ ಅಂದ ತಕ್ಷಣ ನಿರ್ಮಾಪಕ, ವಿತರಕ ಮತ್ತು ಹಂಚಿಕೆದಾರರಿಗೆ ಮಾತ್ರ ಹೋಗಬಾರದು. ಚಿತ್ರಮಂದಿರದ ಬಳಿ ಪಾನಿಪುರಿ ಮಾರುವವರು, ದ್ವಿಚಕ್ರ ಪಾರ್ಕಿಂಗ್ ಅವರಿಗೆ ದುಡ್ಡು ಬಂದರೆ ಆಗ ಅದು ಯಶಸ್ಸು ಎನ್ನಬಹುದು. ಸಿನಿಮಾವು ಯಶಸ್ಸಿಗೂ ಮೀರಿ ಮೇಲಕ್ಕೆ ಹೋಗುತ್ತಿದೆ. ಚಂದ್ರು ಸಿನಿಮಾ ಬಿಟ್ಟು ಬೇರೆನೂ ಯೋಚಿಸುವುದಿಲ್ಲ ಅಂತಹವರಿಗೆ ಲಾಭ ಬಂದರೆ ಮುಂದೆ ಇದಕ್ಕಿಂತಲೂ ಒಳ್ಳೆ ಚಿತ್ರ ಮಾಡಬಹುದು. ಅವರು ಇನ್ನಷ್ಟು ಅಭಿರುಚಿಯ ಚಿತ್ರಗಳನ್ನು ಜನರಿಗೆ ಕೊಡಲಿ ಎಂದರು.
ಸಂಗೀತ ನಿರ್ದೇಶಕ ಡಾ.ಕಿರಣ್ ತೋಟಂಬೈಲು, ಗುರುಕಿರಣ್,ವಿತರಕರಾದ ಮೋಹನ್‍ದಾಸ್‍ಪೈ, ಪುತ್ರ ಧೀರಜ್ ಕಲೆಕ್ಷನ್ ಜೋರಾಗಿದೆ. ಗಲ್ಲಾ ಪಟ್ಟಿಗೆ ತುಂಬಿಸಿಕೊಳ್ಳುತ್ತಾ ಇದ್ದೇವೆ. ಚಂದ್ರು ಅವರಿಗೆ ಹತ್ತು ಸಿನಿಮಾ ಮಾಡುವಷ್ಟು ಹಣ ಬರುತ್ತದೆಂದು ಎಂದರು. ಇವೆಲ್ಲದರ ನಡುವೆಯು ರಚಿತಾ-ಉಪ್ಪಿ ಅಭಿನಯದ ರೋಮ್ಯಾನ್ಸ್ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಲು ಪ್ರೇಕ್ಷಕರು ಇನ್ನು ಚಿತ್ರಮಂದಿರಕ್ಕೆ ಹೋಗುತ್ತಿರುವುದು ಕಾರಣ ಅಂತಾರೆ ಚಿತ್ರ ನೋಡಿದ ಪ್ರೇಕ್ಷಕರು.
ಇಂತಹ ಸೂಪರ್ ಹಿಟ್ ಕೊಟ್ಟ ಆರ್, ಚಂದ್ರ ಇನ್ನು ಉತ್ತಮ ಚಿತ್ರಗಳನ್ನು ಮಾಡಲಿ ಎಂದು ಹಾರೈಸೋಣ.

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *