ತೆರೆಗೆ ಸಿದ್ದವಾಯ್ತು ಕೆಂಪೇಗೌಡ-2..!

ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರವು ಯಶಸ್ಸು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಇದರ ನಿರ್ಮಾಪಕ ಶಂಕರ್‍ರೆಡ್ಡಿ ‘ಕೆಂಪೇಗೌಡ-2’ ಚಿತ್ರಕ್ಕೆ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಪೋಲೀಸ್ ಆಯುಕ್ತ ಸುನಿಲ್‍ಕುಮಾರ್ ಮಾತನಾಡಿ ಹಾಡುಗಳಿಗೆ ಶಕ್ತಿ ಇದೆ. ತಂತ್ರಜ್ಘಾನ ಬೆಳೆದಂತೆ ಹಾವಭಾವ ಬದಲಾವಣೆ ಆಗಿದೆ. ಪೋಲೀಸ್ ಆಧಾರಿತ ಚಿತ್ರಗಳು ಹಿಟ್ ಆಗಿದೆ. ಪೋಲೀಸರು ಕೆಟ್ಟವರಲ್ಲ. ಸಮಾಜದ ಕೊಳಕುಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ. ಆದರೆ ಕೆಲವು ಚಿತ್ರದಲ್ಲಿ ನಮ್ಮನ್ನು ಜೋಕರ್, ಭ್ರಷ್ಟರಂತೆ ತರಹ ತೋರಿಸುತ್ತಾರೆ. ಕೊನೆಗೆ ನಾವೇ ಸುಪ್ರೀಂ ಎಂದು ಹೇಳುತ್ತಾರೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.
ನಮ್ಮ ಕಾಲದಲ್ಲಿ ಬರಹಗಾರರು ಹಾಗೇ ಇದ್ದ ಕಾರಣ ಚಿತ್ರಗಳು ಅದೇ ರೀತಿ ಬರುತ್ತಿತ್ತು. ಈಗ ಬುದ್ದಿವಂತ ಯುವ ಬರಹಗಾರರು ಇರುವುದರಿಂದ ಪೋಲೀಸ್ ಪವರ್ ಏನೆಂದು ತೋರಿಸುತ್ತಿದ್ದಾರೆ. ಕೋಮಲ್ ಕಷ್ಟಪಟ್ಟು ನಾಲ್ಕು ವರ್ಷ ದೇಹವನ್ನು ದಂಡಿಸಿ, ಯಾರಿಗೂ ಕಾಲ್‍ಶೀಟ್ ಕೊಡದೆ ಈ ಸಿನಿಮಾಗೆ ತ್ಯಾಗ ಮಾಡಿದ್ದಾರೆ. ಅವನಿಗೆ ಯಶಸ್ಸು ಸಿಗಬೇಕು. ಪ್ರತಿ ಫ್ರೇಮು ಹೊಸದಾಗಿದ್ದು, ವಿನೂತನ ಕತೆಯಾಗಿದೆ. ನಗಿಸೋ ಕಲಾವಿದ ಸ್ವಮೇಕ್ ಸಿನಿಮಾ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಯಾವ ಚಿತ್ರದ ಪ್ರೇರಣೆಯಾಗಿರುವುದಿಲ್ಲವೆಂದು ಖಚಿತವಾಗಿ ಹೇಳಬಹುದು. ಎಲ್ಲರು ಎಲ್ಲವನ್ನು ಮಾಡಬಹುದು ಎಂಬುದಕ್ಕೆ ಈತನೇ ಸಾಕ್ಷಿ ಎಂದು ಜಗ್ಗೇಶ್ ಹೇಳಿದರು.
ಚಿತ್ರರಂಗಕ್ಕೆ ಬಂದಾಗಿನಿಂದಲೂ ಗಾಡ್‍ಫಾದರ್ ಅಂದರೆ ಅದು ಮಾದ್ಯಮದವರು. ಸರ್ಕಲ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಕರೆ ಬಂದಾಗ ದುಗುಡ ಶುರುವಾಯಿತು. ಯೋಗದ ಮೂಲಕ ತೂಕವನ್ನು ಇಳಿಸಿಕೊಂಡು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆಯಲ್ಲಿದ್ದೇನೆ. ಯಾರು ಹೇಳಿಲ್ಲದ ಹೊಸ ವಿಷಯವನ್ನು ಹೇಳಲಾಗಿದೆ. ಪೋಲೀಸ್ ಅಧಿಕಾರಿಯು ಕೆಲಸದಲ್ಲಿ ಒತ್ತಡ ಇದ್ದರೂ, ಸಾಮಾನ್ಯ ಸೈನಿಕನಂತೆ ಸಮಾಜವನ್ನು ಹೇಗೆ ಸರಿಪಡಿಸುತ್ತಾನೆಂದು ಹೇಳಲಾಗಿದೆ ಅಂತ ನಾಯಕ ಕೋಮಲ್‍ಕುಮಾರ್ ಸಿನಿಮಾದ ಕುರಿತಂತೆ ಒಂದಷ್ಟು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆ ತೆಲುಗು ನಟ ಆಲಿ ಆಗಮನ. ಅವರು ಮಾತನಾಡುತ್ತಾ ಆಂದ್ರಕ್ಕೆ ಡಾ.ಎನ್‍ಟಿಆರ್, ಕರ್ನಾಟಕ್ಕೆ ಡಾ.ರಾಜ್‍ಕುಮಾರ್. ಒಮ್ಮೆ ರಾಜ್‍ಕುಮಾರ್ ಹಾಡುವ ಗೀತೆಗೆ ಅವರ ಸಮ್ಮುಖದಲ್ಲೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿದ್ದು ಸುಕೃತ. ಹೊರಗಡೆ ಹೋದಾಗ ನೀವು ಶಿವರಾಜ್‍ಕುಮಾರ್ ಅಂತ ಕೇಳುತ್ತಾರೆ. ಪುಟ್ಟ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಗುಣದಲ್ಲಿ ರಜನಿಕಾಂತ್‍ರಂತೆ ಇಲ್ಲಿ ಕೋಮಲ್‍ಕುಮಾರ್. ಅವರು ಡ್ಯಾನ್ಸ್, ಫೈಟ್, ನಟನೆ ಮತ್ತು ರೋಮಾನ್ಸ್ ಚೆನ್ನಾಗಿ ಮಾಡಿದ್ದಾರೆಂದು ಹೇಳಿದರು.
ನಿರ್ದೇಶಕರು, ನಾಯಕಿಯರಾದ ರಶ್ಮಿಕಾಶರ್ಮ, ನವನೀತ, ಕೊರಿಯೋಗ್ರಾಫರ್ ಮುರಳಿ, ಲಹರಿವೇಲು, ನಿರ್ಮಾಪಕ ಎ.ವಿನೋದ್, ಹಿರಿಯ ಅಧಿಕಾರಿ ದೇವರಾಜ್ ಮತ್ತು ಸಂಗೀತ ನಿರ್ದೇಶಕ ವರುಣ್‍ಉನ್ನಿ-ಶ್ರೀನಿಧಿ. ಕ್ರಿಕೆಟಿಗ ಶ್ರೀಶಾಂತ್ ನಟನೆ ಮಾಡಿದ್ದಾರೆ. ಅದ್ದೂರಿ ಚಿತ್ರವನ್ನು ಆಗಸ್ಟ್‍ದಲ್ಲಿ ಬಿಡುಗಡೆ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *