ಡಿಫೆರೆಂಟ್ ಸಿನಿಮಾ ನನ್ನ ಪ್ರಕಾರ..!

ಕನ್ನಡ ಚಿತ್ರಗಳಲ್ಲಿ ಸಾಕಷ್ಟು ವೈವಿಧ್ಯತೆಯುಳ್ಳ ಕತೆಗಳು ಬರುತ್ತಿವೆ ಅವರ ಸಾಲಿಗೆ ಈ ಚಿತ್ರವು ಸೇರುವುದರಲ್ಲಿ ಸಂದೇಹವಿಲ್ಲ. ಹೌದು ನಾಲ್ಕು ಕತೆಗಳು ಒಂದಕ್ಕೊಂದು ಸಂಬಂದವಿರುವುದಿಲ್ಲ. ಒಂದೊಂದು ಸನ್ನಿವೇಶಗಳು ಒಂದದಾಗ ಅವು ದಾರಿ ಮಾಡಿಕೊಡುವುದನ್ನು ‘ನನ್ನ ಪ್ರಕಾರ’ ಸಿನಿಮಾದಲ್ಲಿ ತೋರಿಸಲಾಗಿದೆ. ಬಿಡುಗಡೆಗೆ ಸಿದ್ದವಾಗಿರುವ ಕಾರಣ ಚಿತ್ರತಂಡವು ಮಾದ್ಯಮದ ಮುಂದೆ ಹಾಜರಾಗಿ ವಿಷಯಗಳನ್ನು ಹಂಚಿಕೊಂಡರು. ಮೂಲತ: ವಿಶುಯಲ್ ಎಫೆಕ್ಟ್‍ದಲ್ಲಿ ಪರಿಣಿತರಾಗಿರುವ ವಿನಯ್‍ಬಾಲಾಜಿ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ.
ಇಂದು ನಾವುಗಳು ಏನೇ ಹೇಳಬೇಕಾದರೂ ಶೀರ್ಷಿಕೆಯಂತೆ ಶುರು ಮಾಡುತ್ತಾರಂತೆ. ಅದಕ್ಕಾಗಿ ಕ್ಯಾಚಿ ಇರಲೆಂದು ಇದೇ ಹೆಸರನ್ನು ಇಡಲಾಗಿದೆ ಎನ್ನುತ್ತಾರೆ. ಇಲ್ಲಿ ಮಾತನಾಡಿದ ಕಿಶೋರ್ ಇನ್ಸ್‍ಪೆಕ್ಟರ್ ಆಗಿ ಸತ್ಯದ ಅನ್ವೇಷಣೆಯಲ್ಲಿ ತನಿಖೆ ನಡೆಸುವಾಗ ಒಂದು ಗುಂಪು ದಾರಿ ತಪ್ಪಿಸುವ ಕೆಲಸ ಮಾಡುತ್ತದೆ. ಮುಂದೇನು ಎಂಬುದು ಥ್ರಿಲ್ಲರ್ ಮಾದರಿಯಲ್ಲಿ ಬರುತ್ತದೆಂದು ಹೇಳಿದರು. ಪ್ರಿಯಾಮಣಿ ವೈದ್ಯೆ ಪಾತ್ರದಲ್ಲಿ ಪತ್ನಿಯಾಗಿ ತನಿಖೆಯಲ್ಲಿ ಸಹಕಾರ ನೀಡುತ್ತಾರಂತೆ. ಬಡತನದ ಬಿಕ್ಕಲ ಹುಡುಗನಾಗಿ ಅರ್ಜುನ್‍ಯೋಗಿ, ಜೋಡಿಯಾಗಿ ಮಯೂರಿ ಉಳಿದಂತೆ ನಿರಂಜನ್‍ದೇಶಪಾಂಡೆ, ವೈಷ್ಣವಿ, ಸಬ್‍ಇನ್ಸ್‍ಪೆಕ್ಟರ್ ಆಗಿ ಪ್ರಮೋದ್‍ಶೆಟ್ಟಿ, ಅಶೋಕ್ ತಮ್ಮ ಪಾತ್ರದ ಪರಿಚಯ ಮಾಡಿಕೊಂಡರು. ಸಂಗೀತ ಅರ್ಜುನ್‍ರಾಮು. ಚಿತ್ರಕ್ಕೆ ಬಂಡವಾಳ ಹೂಡಿರುವುದು ಗುರುರಾಜ್.ಎಸ್.
ಇವರೊಂದಿಗೆ ಕಿರಣ್‍ತಲಸಿಲ, ಜಗದೀಶ್, ಗೋವಿಂದ, ವೆಂಕಟೇಶ, ಬಂದುವರದರಾಜಲು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಪೋಸ್ಟರ್‍ದಲ್ಲಿ ಥಿಯರಿ-2 ಇರುವ ಬಗ್ಗೆ ಪ್ರಶ್ನೆ ತೂರಿಬಂತು. ಇದಕ್ಕೆ ಉತ್ತರಿಸಿದ ನಿರ್ದೇಶಕರು ಕ್ಲೈಮಾಕ್ಸ್‍ದಲ್ಲಿ ಸಣ್ಣ ತಿರುವು ನೀಡದ್ದು, ಅದು ಮುಂದುವರೆದ ಭಾಗದಂತೆ ಪಾರ್ಟ್-2ದಲ್ಲಿ ಬರಲಿದೆ ಎಂಬ ಅಚ್ಚರಿ ವಿಷಯವನ್ನು ಹೇಳಿದರು.

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *