ಮಾಸ್ ರುಸ್ತುಂಗೆ ಪ್ರೇಕ್ಷಕ ಸುಸ್ತು..!

ಕನ್ನಡ ಹಾಗೂ ಬೇರೆ ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿರುವ ರವಿವರ್ಮ ಈಗ ಕನ್ನಡದಲ್ಲಿ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರುಸ್ತುಂ ಸಿನಿಮಾ ಖಂಡಿತಾ ನಿರಾಸೆ ಮಾಡಲ್ಲ. ಸಖತ್ ಕಿಕ್ ಕೊಡುವುದರ ಜೊತೆಗೆ ಶಿವರಾಜ್‍ಕುಮಾರ್ ಅಭಿಮಾನಿಗಳಿಗೆ ರಸದೌತಣವಾಗಿದೆ ಎಂದರೆ ತಪ್ಪಾಗಲಾರದು.
ಚಿತ್ರ ಆರಂಭದಲ್ಲಿ ಜಿಲ್ಲಾಧಿಕಾರಿ ಕಾಣೆ, ಅದರ ಹಿಂದೆ ಗೃಹಮಂತ್ರಿ ಕೈವಾಡ. ಯಾವುದೋ ಹಗರಣ…ಹೀಗೆ ಶುರುವಾಗುವ ರುಸ್ತುಂ ಕಂಪ್ಲೀಟ್ ಆಕ್ಷನ್ ಚಿತ್ರ. ಕೌಟುಂಬಿಕ ಮಿಶ್ರಿತ ಆಕ್ಷನ್ ಚಿತ್ರ. ಜಿಲ್ಲಾಧಿಕಾರಿ ಯಾಕೆ ಕಾಣೆ ಆಗ್ತಾನೆ, ಯಾರು ಕಿಡ್ನಾಪ್ ಮಾಡಿದ್ದು, ಆ ಕುಟುಂಬಕ್ಕೆ ಜೊತೆಯಾಗುವ ಶಿವಣ್ಣ ಯಾರು, ಆ ಡಿ.ಸಿಗೂ ಶಿವಣ್ಣನಿಗೂ ಏನು ಸಂಬಂಧ ಎಂಬ ಕುತೂಹಲಗಳೊಂದಿಗೆ ಇಂಟ್ರೆಸ್ಟಿಂಗ್ ಆಗಿ ಮೊದಲಾರ್ಧ ಮುಗಿಸಿದ್ದಾರೆ ನಿರ್ದೇಶಕರು.
ಇಲ್ಲಿಯ ವ್ಯವಸ್ಥೆಯ ಮುಂದೆ ಅಸಹಾಯಕನಾಗಿ ನಿಲ್ಲುವ ಕಾಮನ್ ಮ್ಯಾನ್ (ಶಿವಣ್ಣ) ಸೆಕೆಂಡ್ ಹಾಫ್ ನಲ್ಲಿ ಸಿಂಹದ ಪ್ರತಿರೂಪ ತಾಳುತ್ತಾರೆ.
ಬಿಹಾರ್ ರಾಜ್ಯದ ಪೊಲೀಸ್ ಆಗಿ ಮಿಂಚಿರುವ ಹ್ಯಾಟ್ರಿಕ್ ಹೀರೋ, ದುಷ್ಟರ ಪಾಲಿಗೆ ರಾಕ್ಷಸನಂತೆ ಕಾಡುತ್ತಾರೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಥೆ ಬಿಹಾರ್‍ಗೆ ಯಾಕೆ ಹೋಯ್ತು ಎಂಬುದು ಸಿನಿಮಾ ನೋಡಿದ್ರೆನೇ ಗೊತ್ತಾಗುತ್ತೆ. ಶಿವಣ್ಣನ ಎನರ್ಜಿಗೆ ತಕ್ಕಂತೆ ಕ್ಯಾರೆಕ್ಟರ್ ಮಾಡಿರುವ ರವಿವರ್ಮ, ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆಯುವ ರೀತಿ ಆಕ್ಷನ್ ಇಟ್ಟಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನ ಮುಖ್ಯ ಕಥಾವಸ್ತುನ್ನಾಗಿಸಿಕೊಂಡು ಇಡೀ ಸಿನಿಮಾ ಮಾಡಿರುವುದು ಗಮನಾರ್ಹ.
ವಿವೇಕ್ ಒಬೆರಾಯ್ ಸೂಪರ್ ಪೊಲೀಸ್ ಇಲಾಖೆಯಲ್ಲಿ ಶಿವಣ್ಣನ ಸ್ನೇಹಿತನಾಗಿ ನಟಿಸಿರುವ ವಿವೇಕ್ ಒಬೇರಾಯ್ ಹ್ಯಾಟ್ರಿಕ್ ಹೀರೋಗೆ ವಿರುದ್ಧದ ವ್ಯಕ್ತಿತ್ವ. ಚಿತ್ರಕ್ಕೆ ಮೇಜರ್ ಟ್ವಿಸ್ಟ್ ಕೊಡುವ ಪಾತ್ರ. ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಶಿವಣ್ಣನ ಪತ್ನಿ ಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಗೆ ಇದು ಇನ್ನೊಂದು ಕ್ಲಾಸಿಕ್ ಪಾತ್ರ. ಶಿವಣ್ಣನ ತಂಗಿ ಪಾತ್ರದಲ್ಲಿ ನಟಿಸಿರುವ ಮಯೂರಿಯೂ ಉತ್ತಮ ನಟನೆ ಮಾಡಿದ್ದಾರೆ. ಕಾಮಿಡಿ ಶಿವರಾಜ್ ಕೆಆರ್ ಪೇಟೆಗೆ ಇಲ್ಲಿ ಹಾಸ್ಯ ಮಾಡಲು ಅವಕಾಶ ಕೊಟ್ಟಿಲ್ಲ ಆದರೂ ಪೊಲೀಸ್ ಅಧಿಕಾರಿಯಾಘಿ ಕಾನಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಮಹೇಂದ್ರನ್ ಕಿಲ್ಲಿಂಗ್ ಉತ್ತಮ ನಟನೆಯೊಂದಿಗೆ ಕಾಣಿಸಿಕೊಳ್ಳುತ್ತಾರೆ, ಒಟ್ಟಾರೆ ಪಾತ್ರಗಳು ಎಲ್ಲವೂ ಸೂಕ್ತವಾಗಿದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ.
ರುಸ್ತುಂ ಚಿತ್ರವು ಪಕ್ಕಾ ಮಾಸ್ ಸ್ಟೈಲ್‍ನಲ್ಲಿ ತಯಾರು ಮಾಡಿದ್ದಾರೆ, ಬರೀ ಹೊಡಿ, ಬಡಿ ಜಾಸ್ತಿ ಕಾಣಸಿಗುತ್ತದೆ, ಇದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹಾಗೂ ಕಾಮಿಡಿ ಇದ್ದಿದ್ದರೆ ಎಲ್ಲ ಫ್ಯಾಮಿಲಿ ವರ್ಗಕ್ಕೂ ಇಷ್ಟವಾಗುತ್ತಿತ್ತು ಈಗಲೂ ಉತ್ತಮ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ, ಆದರೆ ಶಿವಣ್ಣ ಅಭಿಮಾನಿಗಳಿಗೆ ಮತ್ತೆ ಮತ್ತೆ ನೋಡುವ ಹಾಗೆ ಮಾಡಿದ್ದಾರೆ ನಿರ್ದೇಶಕ ರವಿವರ್ಮ.

ಪೇಜ್ 3 ರೇಟಿಂಗ್ : 3/5

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *