ವೀಕೆಂಡ್ ನೋಡಿ ಮಸ್ತ್ ಮಜಾ ಮಾಡಿ

ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ವೆರೈಟಿ ಸಿನಿಮಾಗಳು ತೆರೆಗೆ ಬರುತ್ತಿವೆ, ಅದರಲ್ಲೂ ಈ ಶುಕ್ರವಾರ ತೆರೆಕಂಡ ವೀಕೆಂಡ್ ಚಿತ್ರ ಅದ್ದೂರಿಯಾಗಿ ತೆರೆ ಕಂಡಿದೆ, ಎಲ್ಲಾ ಚಿತ್ರಮಂದಿರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೊಸ ನಾಯಕನಾಗಿ ಅಜಯ್‌ (ಮಿಲಿಂದ್‌) ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗನ ಪಾತ್ರ ಮಾಡಿದ್ದಾನೆ. ಇವನ ತಾತನ ಪಾತ್ರವನ್ನು ಅನಂತನಾಗ್‌ ಮಾಡಿದ್ದಾರೆ. ಹಾಗೂ ನಾಯಕನ ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಅನುಪಮಾ (ಸಂಜನಾ ಬುರ್ಲಿ) ನಟಿಸಿದ್ದಾರೆ.

ತನ್ನ ತಂದೆಯನ್ನು ದ್ವೇಷಿಸುವ ಅನುಪಮಾ ನಾಯಕನ ಜೀವನಕ್ಕೆ ಹತ್ತಿರವಾಗಿರುತ್ತಾಳೆ. ಈ ವಿಷಯವನ್ನು ಕೇಳಿ ಅಪ್ಪನಿಗೆ ಸಹಿಸಿಕೊಳ್ಳುಲು ಆಗುವುದಿಲ್ಲ. ನಾಯಕ ಅಜಯ್‌ ಅವರು ದೊಡ್ಡ ಗುಂಪೊಂದು ವೀಕೆಂಡ್‌ನಲ್ಲಿ ಮಸ್ತಿ ಮಾಡುವ ಹುಚ್ಚು. ಇವರ ಗುಂಪಿನಲ್ಲಿರುವ ರಕ್ಷಾಗೆ ಅಜಯ್‌ ಮೇಲೆ ಕ್ರಶ್. ಇನ್ನೊಂದೆಡೆ ರಕ್ಷಾಳನ್ನು ಪ್ರೀತಿಸುವ ರಾಕಿ. ಇನ್ನೊಂದೆಡೆ ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡು ಬರಿಗೈ ಅಗಿ ಡಿಪ್ರೆಷನ್‌ಗೆ ಒಳಗಾದ ಎಂಜಿನಿಯರ್‌ ಹುಡುಗರ ಗುಂಪು. ಇಂತಹ ವಿಷಯಗಳನ್ನು ತುಂಬ ನೈಜವಾಗಿ ತೊರೀಸಿದ್ದಾರೆ ನಿರ್ದೇಶಕರು.

ಚಿತ್ರದಲ್ಲಿ ಉತ್ತಮ ಸಂದೇಶವಿದೆ, ಚಿತ್ರಕಥೆಯಲ್ಲಿ ಉತ್ತಮವಾಗಿ ಹೇಳಿದ್ದಾರೆ  ಹೇಳಿ ಬೋರ್‌ ಹೊಡೆಸಿಲ್ಲ. ಒಟ್ಟಾರೆ ಯುತ್ ಫುಲ್ ಸಿನಿಮಾವಾಗಿದೆ ತುಂಬ ಕಲರ್ ಫುಲ್ ಆಗಿ ಮೂಡಿಬಂದಿದೆ.  ಕಾಮಿಡಿ ದೃಶ್ಯಗಳು ಸನ್ನಿವೇಶಕ್ಕೆ ತಕ್ಕಂತೆ ಪ್ರೇಕ್ಷಕರನ್ನು ರಂಜಿಸುತ್ತದೆ.

ವೀಕೆಂಡ್ ಚಿತ್ರ ಆರಂಭದಲ್ಲಿ ಲವ್‌ಸ್ಟೋರಿ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ ಆದರೆ ಸಿನಿಮಾ ಆ ನಂತರ ಮತ್ತೂಂದು ಆಯಾಮಕ್ಕೆ ತೆರೆದುಕೊಳ್ಳುತ್ತದೆ. ಜೊತೆಗೆ ಚಿತ್ರದಲ್ಲಿ ಕುತೂಹಲಕಾರಿ ಅಂಶಗಳು ಇವೆ. ಇವೆಲ್ಲವು ನಿಮಗೆ ಗೊತ್ತಾಗಬೇಕೆಂದರೆ ನೀವು ಥಿಯೇಟರ್ ಗೆ ಹೋಗಿ ಇದೇ ವೀಕೆಂಡ್ ನಲ್ಲಿ ಸಿನಿಮಾ ನೋಡಲೇಬೇಕು. ನೀವು ಕೊಟ್ಟ ಕಾಸಿಗೆ ಮೋಸವಾಗುವುದಿಲ್ಲ.
ಇಷ್ಟಾದರೂ ಬೋರ್‌ ಆಗದಂತಹ ನಿರೂಪಣೆ ಮಾಡಿದ್ದಾರೆ ನಿರ್ದೇಶಕ ಶೃಗೇರಿ ಸುರೇಶ್. ಸಂಭಾಷಣೆ, ಛಾಯಾಗ್ರಹಣ, ಸಂಗೀತ ಗಮನ ಸೆಳೆಯುತ್ತದೆ. ಅನಂತನಾಗ್‌ ಎಂದಿನಂತೆ ತಮ್ಮ ಸಹಜ ನಟನೆಯಿಂದ ಇಷ್ಟವಾಗುತ್ತಾರೆ. ಮಿಲಿಂದ್‌ ಒಬ್ಬ ಕನ್ನಡದ ಭರವಸೆಯ ನಟನಾಗಿ ಕಾಣಿಸಿಕೊಂಡಿದ್ದಾರೆ. ನಟಿ ಸಂಜನಾ ನಟನೆ ಇಷ್ಟವಾಗುತ್ತದೆ. ಪೊಲೀಸ್‌ ಪಾತ್ರದಲ್ಲಿ ನಿರ್ಮಾಪಕ ಮಂಜುನಾಥ್‌ ಎಲ್ಲರ ಗಮನ ಸೆಳೆಯುತ್ತಾರೆ.

ವಿತರಕರಾದ ಧೀರಜ್ ಎಂಟರ್ ಪ್ರೈಸೆಸ್ ಅವರು ಸುಮಾರು 100-150 ಥಿಯೇಟರ್ ಗಳಲ್ಲಿ ರಿಲೀಸ್ ಮಾಡಿದ್ದರು ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಈ ವಾರ ಬಿಡುಗಡೆಯಾದ ವೀಕೆಂಡ್ ಚಿತ್ರವನ್ನು ನೋಡಿ ಮಸ್ತ್ ಮಜಾ ಮಾಡಿ..

ಪೇಜ್ 3 ರೇಟಿಂಗ್ – 3.5/5

Page 3 Hotnews has been covering the lifestyle and careers of Indian film celebrities for the last 10 years and its digital avatar carries forward that legacy in a zany new form. its covering KANNADA Cinema industry and Other cinema industry.. its 100% Hot news web portal & Print Magazine.

Leave a Reply

Your email address will not be published. Required fields are marked *